KSEEB Solutions for Class 10 History Chapter 1 Bharatakke Yuropiyannara Agamana


ಅಭ್ಯಾಸಗಳು

I. ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ಭರ್ತಿಮಾಡಿ

1) 1453ರಲ್ಲಿ ಅಟೋಮಾನ್ ಟರ್ಕರು ಯಾವ ನಗರವನ್ನು ವಶಪಡಿಸಿಕೊಂಡರು?

ಉತ್ತರ: ಕಾನ್ಸ್ಟಾಂಟಿನೋಪಲ್

2) ಭಾರತ ಮತ್ತು ಯುರೋಪ್ ನಡುವೆ ಹೊಸ ಜಲಮಾರ್ಗವನ್ನು ಕಂಡು ಹಿಡಿದವರು ಯಾರು?

ಉತ್ತರ: ವಾಸ್ಕೋಡಗಾಮಾ

3) ಭಾರತದಲ್ಲಿದ್ದ ಫ್ರೆಂಚರ ರಾಜಧಾನಿ ಯಾವುದು?

ಉತ್ತರ: ಪಾಂಡಿಚೇರಿ

4) ರಾಬರ್ಟ್ ಕ್ಲೈ ವನು 1757ರಲ್ಲಿ ಸಿರಾಜ್-ಉದ್ದೌಲನ ಮೇಲೆ ಯಾವ ಕದನ ಸಾರಿದನು?

ಉತ್ತರ: ಪ್ಲಾಸಿ

5) ಈಸ್ಟ್ ಇಂಡಿಯಾ ಕಂಪನಿಗೆ ಬಂಗಾಳದ 'ದಿವಾನಿ' ಹಕ್ಕನ್ನು ನೀಡಿದವರು ಯಾರು?

ಉತ್ತರ: ಎರಡನೇ ಷಾ ಆಲಂ

6) ಬಂಗಾಳದಲ್ಲಿ ‘ದ್ವಿಪ್ರಭುತ್ವ’ವನ್ನು ಜಾರಿಗೆ ತಂದವರು ಯಾರು?

ಉತ್ತರ: ರಾಬರ್ಟ್ ಕ್ಲೈವ್


II. ಕೆಳಗಿನ ಪ್ರಶ್ನೆಗಳಿಗೆ ಗುಂಪುಗಳಲ್ಲಿ ಚರ್ಚಿಸಿ ಉತ್ತರಿಸಿ

1) ಮಧ್ಯಕಾಲದಲ್ಲಿ ಭಾರತ ಮತ್ತು ಯುರೋಪ್ ನಡುವೆ ವ್ಯಾಪಾರ ಹೇಗೆ ನಡೆಯುತ್ತಿತ್ತು?

ಉತ್ತರ: ಮಧ್ಯಕಾಲದಲ್ಲಿ ಭಾರತ ಮತ್ತು ಯುರೋಪ್ ನಡುವೆ ವ್ಯಾಪಾರವು ಏಷ್ಯಾದ ಸರಕುಗಳನ್ನು ಅರಬ್ ವರ್ತಕರು ಪೂರ್ವ ರೋಮನ್ (ಬೈಜಾಂಟಿಯಂ) ಸಾಮ್ರಾಜ್ಯದ ರಾಜಧಾನಿಯಾದ ಕಾನ್‌ಸ್ಟಾಂಟಿನೋಪಲ್ ನಗರಕ್ಕೆ ತಲುಪಿಸುತ್ತಿದ್ದರು. ಅಲ್ಲಿಂದ ಇಟಲಿಯ ವರ್ತಕರು ಅವುಗಳನ್ನು ಕೊಂಡು ಯುರೋಪಿನ ದೇಶಕ್ಕೆ ಮಾರುತ್ತಿದ್ದರು. ಭಾರತದ ಸಾಂಬಾರ್ ಪದಾರ್ಥಗಳಾದ ಮೆಣಸು, ಜೀರಿಗೆ, ದಾಲ್ಚಿನಿ, ಶುಂಠಿ, ಏಲಕ್ಕಿ, ಮುಂತಾದ ಉತ್ಪನ್ನಗಳಿಗೆ ಯುರೋಪಿನಲ್ಲಿ ಅಪಾರ ಬೇಡಿಕೆ ಇತ್ತು. ಹೀಗೆ ಏಷ್ಯಾ ಮತ್ತು ಯುರೋಪ್ ನಡುವೆ ಕಾನ್‌ಸ್ಟಾಂಟಿನೋಪಲ್ ಅಂತಾರಾಷ್ಟ್ರೀಯ ಸರಕು ವಿನಿಮಯ ಕೇಂದ್ರವಾಗುವ ಮೂಲಕ ವ್ಯಾಪಾರದ ಹೆಬ್ಬಾಗಿಲು ಎಂದು ಪರಿಗಣಿಸಲ್ಪಟ್ಟಿತು. ಏಷ್ಯಾ ದೇಶಗಳ ವ್ಯಾಪಾರದ ಮೇಲೆ ಅರಬ್ಬರು, ಯುರೋಪಿನ ದೇಶಗಳ ವ್ಯಾಪಾರದ ಮೇಲೆ ಇಟಲಿ ವರ್ತಕರು ಏಕಸ್ವಾಮ್ಯ ಸಾಧಿಸಿದ್ದರು. ಏಷ್ಯಾದ ಸರಕುಗಳು ವರ್ತಕರಿಗೆ ಒಳ್ಳೆಯ ಲಾಭವನ್ನು ತಂದು ಕೊಡುತಿದ್ದವು.

2) ಭಾರತಕ್ಕೆ, ಹೊಸ ಜಲಮಾರ್ಗ ಕಂಡು ಹಿಡಿಯಲು ಕಾರಣವಾದ ಅಂಶಗಳನ್ನು ಚರ್ಚಿಸಿರಿ.

ಉತ್ತರ: 1453ರಲ್ಲಿ ಅಟೋಮಾನ್ ಟರ್ಕರು ಕಾನ್‌ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡಿದ್ದರಿಂದ ಏಷ್ಯಾ ಮತ್ತು ಯುರೋಪ್ ನಡುವಿನ ವ್ಯಾಪಾರದ ಮಾರ್ಗವನ್ನು ಸಂಧಿಸುವ ಎಲ್ಲಾ ಮಾರ್ಗಗಳು ಟರ್ಕರ ನಿಯಂತ್ರಣಕ್ಕೆ ಹೋದವು. ಟರ್ಕರು ಸಿಕ್ಕ ಅವಕಾಶದಿಂದ ಮಾರ್ಗದ ವ್ಯಾಪಾರದ ಮೇಲೆ ತೀವ್ರತರದ ತೆರಿಗೆಯನ್ನು ವಿಧಿಸತೊಡಗಿದರು. ಇದರ ಪರಿಣಾಮವಾಗಿ ವರ್ತಕರಿಗೆ ಈ ಮಾರ್ಗದ ವ್ಯಾಪಾರವು ಲಾಭದಾಯಕವಾಗಿ ಪರಿಣಮಿಸಲಿಲ್ಲ. ಎರಡನೆಯ ಕಾರಣ ಇಟಲಿಯ ವರ್ತಕರ ಏಕಸ್ವಾಮ್ಯವನ್ನು ಮುರಿಯಲು ಸ್ಪೇನ್, ಪೋರ್ಚುಗಲ್ ಮೊದಲಾದ ಯುರೋಪಿನ ದೇಶದ ರಾಜರು ಭಾರತಕ್ಕೆ ಹೊಸ ಜಲಮಾರ್ಗವನ್ನು ಕಂಡುಹಿಡಿಯಲು ಸಾಹಸಿ ನಾವಿಕರನ್ನು ಪ್ರೋತ್ಸಾಹಿಸಲಾರಂಭಿಸಿದರು. ವೈಜ್ಞಾನಿಕ ಆವಿಷ್ಕಾರಗಳಾದ ದಿಕ್ಕೂಚಿ, ಮೊದಲಾದವು ಸಮುದ್ರಯಾನಕ್ಕೆ ಸಹಾಯಕಾರಿಯಾದವು. ಭಾರತಕ್ಕೆ ಪರ್ಯಾಯ ಮಾರ್ಗ ಹುಡುಕಲು ಪ್ರೇರಣೆ ನೀಡಿದವು.

3) ಭಾರತಕ್ಕೆ ವ್ಯಾಪಾರಕ್ಕಾಗಿ ಬಂದ ಯುರೋಪಿಯನ್ನರು ಗಳನ್ನು ಪಟ್ಟಿ ಮಾಡಿ.

ಉತ್ತರ: ಜಲಮಾರ್ಗದ ಮೂಲಕ ವ್ಯಾಪಾರಕ್ಕಾಗಿ ಭಾರತಕ್ಕೆ ಬಂದ ಮೊಟ್ಟ ಮೊದಲ ಯುರೋಪಿಯನ್ನರು ಪೋರ್ಚುಗೀಸರು.
ಡಚ್ಚರು: ಹಾಲಂಡ್ ಅಥವಾ ನೆದರಲ್ಯಾಂಡ್ ದೇಶದವರು ವ್ಯಾಪಾರ ನಡೆಸುವ ಉದ್ದೇಶದಿಂದ ಸಾ.ಶ. 1602ರಲ್ಲಿ ಯುನೈಟೆಡ್ ಈಸ್ಟ್ ಇಂಡಿಯಾ ಕಂಪನಿಯನ್ನು ಸ್ಥಾಪಿಸಿಕೊಂಡು ಭಾರತ ಪ್ರವೇಶಿಸಿದರು.
ಇಂಗ್ಲಿಷರು: ಇಂಗ್ಲೆಂಡಿನ ಎಲಿಜೆಬೆತ್ ರಾಣಿಯು ಸಾ.ಶ. 1600ರ ಡಿಸೆಂಬರ್ 31ರಂದು ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿಗೆ ಪೂರ್ವ ದೇಶಗಳೊಂದಿಗೆ ವ್ಯಾಪಾರ ನಡೆಸಲು ಪರವಾನಿಗೆ ನೀಡಿದಳು.
ಫ್ರೆಂಚರು: ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿಯು 1664ರಲ್ಲಿ ಸರ್ಕಾರಿ ಒಡೆತನದ ಕಂಪನಿಯಾಗಿ ಆಗಮಿಸಿತು. ಇದು 1668ರಲ್ಲಿ ತನ್ನ ಪ್ರಪ್ರಥಮ ದಾಸ್ತಾನು ಮಳಿಗೆಯನ್ನು ಸೂರತ್‌ನಲ್ಲಿ ಆರಂಭಿಸಿತು. ಹೀಗೆ ಭಾರತಕ್ಕೆ ವ್ಯಾಪಾರಕ್ಕಾಗಿ ಬಂದ ಯುರೋಪಿಯನ್ನರು, ಪೋರ್ಚುಗೀಸರು, ಡಚ್ಚರು, ಇಂಗ್ಲಿಷರು ಮತ್ತು ಫ್ರೆಂಚರು.

4) ಎರಡನೇ ಕಾರ್ನಾಟಿಕ್‌ ಯುದ್ಧವನ್ನು ವಿವರಿಸಿ.

ಉತ್ತರ: ಹೈದರಾಬಾದ್‌ ಸಂಸ್ಥಾನದ ನಿಜಾಮನಾದ ಅಸಫ್‌ಜಾನ್‌ 1748ರಲ್ಲಿ ಮರಣ ಹೊಂದಿದನು. ಫ್ರೆಂಚರು ಅಸಫ್‌ಜಾನ್‌ ಮಗನಾದ ಸಾಲಾಬತ್‌ಜಂಗನನು ಹೈದರಾಬಾದಿನ ನಿಜಾಮನನ್ನಾಗಿ ಮಾಡಿದರು. ‘ಬುಸ್ಸಿ’ ಎಂಬ ಅಧಿಕಾರಿಯನ್ನು ಸಾಲಾಬತ್‌ಜಂಗನ ರಕ್ಷಣೆಗಾಗಿ ನೇಮಿಸಿದರು. ಚಂದಾ ಸಾಹೇಬನು ಕಾರ್ನಾಟಿಕ್‌ನ ನವಾಬನಾಗಿದ್ದನು. ಇಂಗ್ಲಿಷ್ ಈಸ್ಟ್‌ ಇಂಡಿಯಾ ಕಂಪನಿಯ ಆಧಿಕಾರಿ ರಾಬರ್ಟ್‌ ಕ್ಲಬ್‌ನು ಕಾರ್ನಾಟಿಕ್‌ದ ರಾಜಧಾನಿ ಆರ್ಕಾಟಿನ ಮೇಲೆ ಆಕ್ರಮಣ ಮಾಡಿ ಫ್ರೆಂಚರು ಮತ್ತು ಚಂದಾಸಾಹೇಬನನ್ನು ಸೋಲಿಸಿದನು ಹಾಗೂ ಬಂಧಿಸಿ ಹತ್ಯೆ ಮಾಡಲಾಯಿತು. ಚಂದಾಸಾಹೇಬನ ಸ್ಥಾನಕ್ಕೆ ಬ್ರಿಟಿಷರು ಅನ್ವರುದ್ದೀನನ ಮಗನಾದ ಮಹಮ್ಮದ್‌ ಅಲಿಯನ್ನು ನವಾಬನನ್ನಾಗಿ ನೇಮಕ ಮಾಡಿದರು. ಕೊನೆಗೆ ಎರಡನೆಯ ಕಾರ್ನಾಟಿಕ್‌ ಯುದ್ಧವು ‘ಪಾಂಡಿಚೇರಿ ಒಪ್ಪಂದ’ದೊಂದಿಗೆ ಮುಕ್ತಾಯವಾಯಿತು. ಈ ಯುದ್ಧವು ಫ್ರಂಚರಿಗೆ ರಾಜಕೀಯ ಹಿನ್ನೆಡೆಯನ್ನು ಹಾಗೂ ಬ್ರಿಟಿಷರಿಗೆ ಪ್ರತಿಷ್ಠೆಯನ್ನು ತಂದುಕೊಟ್ಟಿತು.

5) ಪ್ಲಾಸಿ ಕದನಕ್ಕೆ ಕಾರಣ ಮತ್ತು ಪರಿಣಾಮಗಳನ್ನು ತಿಳಿಸಿ.

ಉತ್ತರ: ಪ್ಲಾಸಿ ಕದನ (1757): ಬಂಗಾಳದ ನವಾಬನಾದ ಅಲಿವರ್ಧಿಖಾನನು 1756ರಲ್ಲಿ ನಿಧನನಾದನು. ನಂತರ ಅವನ ಮೊಮ್ಮಗನಾದ ಸಿರಾಜ್‌-ಉದ್‌-ದೌಲನು ಅಧಿಕಾರಕ್ಕೆ ಬಂದನು. ಬ್ರಿಟಿಷರಿಗೂ ಮತ್ತು ಸಿರಾಜ್‌-ಉದ್‌-ದೌಲನಿಗೂ ಇತಿಹಾಸ ಪ್ರಸಿದ್ದ ಪ್ಲಾಸಿ ಕದನ ನಡೆಯಿತು.

 

ಪ್ಲಾಸಿ ಕದನಕ್ಕೆ ಕಾರಣಗಳು:
1. ದಸ್ತಕಗಳ ದುರುಪಯೋಗ: ಕಂಪನಿಯ ವ್ಯಾಪಾರಕ್ಕಾಗಿ ನೀಡಿದ ದಸ್ತಕಗಳನ್ನು ಬ್ರಿಟಿಷ್ ನೌಕರರು ದುರುಪಯೋಗ ಪಡಿಸಿಕೊಳ್ಳುವ ಮೂಲಕ ರಾಜ್ಯದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡುತ್ತಿದ್ದುದು ಸಿರಾಜನನ್ನು ಕೆರಳಿಸಿತು.

2. ಅನುಮತಿ ಇಲ್ಲದೆ ಕೋಟಿಯ ದುರಸ್ತಿ: ಬ್ರಿಟಿಷರು ಫ್ರೆಂಚರ ಭಯದಿಂದ ಕಲ್ಕತ್ತಾದ ಕೋಟೆಯನ್ನು ಬಲಪಡಿಸಿ, ಫಿರಂಗಿಗಳನ್ನು ಇಟ್ಟರು. ಅನುಮತಿ ಪಡೆಯದೇ ಕೋಟಿಯನ್ನು ದುರಸ್ತಿ ಮಾಡಿಸಿದ್ದರಿಂದ ಫಿರಂಗಿಗಳನ್ನು ತೆಗೆದು ಹಾಕಲು ಸಿರಾಜ್‌ ಸೂಚಿಸಿನಾದರೂ ಅವರು ಪಾಲಿಸಲಿಲ್ಲ. ಇದರಿಂದ ಸಿರಾಜನು ಆಕ್ರೋಶಗೊಂಡನು.

3. ಕಪ್ಪುಕೋಣೆ ದುರಂತ: ಆಗ ಸಿರಾಜನು ಪೋರ್ಟ್‌ ವಿಲಿಯಂ ಕೋಟೆಯನ್ನು ಸುಲಭವಾಗಿ ಗೆದ್ದು ಕೆಲವರನ್ನು ಸೆರೆ ಹಿಡಿದನು. ಸಿರಾಜನು ಆಕ್ರಮಣದಲ್ಲಿ ಸೆರೆ ಸಿಕ್ಕಿದ 146 ಬ್ರಿಟಿಷರನ್ನು ಚಿಕ್ಕ ಕೊಠಡಿಯೊಂದರಲ್ಲಿ ಬಂಧಿಸಿಟ್ಟನು. ಅವರಲ್ಲಿ 134 ಮಂದಿ ಅಸುನೀಗಿದರು ಎಂಬುದಾಗಿತ್ತು. ಇದನ್ನು ಕಪ್ಪುಕೋಣೆಯ ದುರಂತ ಎಂದು ಕರೆಯಲಾಗಿದೆ. ಈ ಸುದ್ದಿ ಕೇಳಿ ರಾಬರ್ಟ್‌ ಕ್ಲಬ್‌ ಉಗ್ರ ಕೋಪದಲ್ಲಿ ಬಲಿಷ್ಠ ಸೇನೆಯೊಂದಿಗೆ ಬಂಗಾಳಕ್ಕೆ ಬಂದನು.

 

ಪ್ಲಾಸಿ ಕದನದ ಪರಿಣಾಮಗಳು:
1. ಈ ಯುದ್ಧದ ಫಲವಾಗಿ ಭಾರತೀಯರಲ್ಲಿದ್ದ ಅನೈತಿಕತೆ, ಅಸಂಘಟನೆ, ವ್ಯಾಪಾರಿ ವರ್ಗದಲ್ಲಿದ್ದ ಲೋಭಿತನವನ್ನು ಪ್ರದರ್ಶಿಸಿತು.
2. ಮೀರ್‌ ಜಾಫರ್‌ ಬಂಗಾಳದ ನವಾಬ ಹಾಗೂ ಕಂಪನಿ ಮತ್ತು ನೌಕರರ ಕೃಗೊಂಬೆಯಾಗುವ ಮೂಲಕ ಶೋಷಣೆಗೆ ಒಳಗಾದನು. ನವಾಬನ ಬೊಕ್ಕಸ ಬರಿದಾಯಿತು.
3. ಕಂಪನಿಯು ಬಂಗಾಳ ಪ್ರಾಂತ್ಯದಲ್ಲಿ ವ್ಯಾಪಾರ ನಡೆಸಲು ಅನಿರ್ಬಂಧಿತ ಹಕ್ಕನ್ನು ಪಡೆಯಿತು.
4. ಬಂಗಾಳ ಬ್ರಿಟಿಷರ ವಶವಾಯಿತು.
5. ಸಿರಾಜನು ಕಲ್ಕತ್ತಾದ ಮೇಲೆ ನಡೆಸಿದ ಆಕ್ರಮಣಕ್ಕೆ ಪರಿಹಾರವಾಗಿ ಮೀರ್‌ ಜಾಫರ್‌ನು ಕಂಪನಿಗೆ ಹದಿನೇಳು ಕೋಟಿ ಎಪ್ಪತ್ತು ಲಕ್ಷ ರೂಪಾಯಿಗಳನ್ನು ನೀಡಿದನು.
6. ಜಾಫರ್ ಅಸಮರ್ಥನೆಂದು ನವಾಬ ಸ್ಥಾನದಿಂದ ಪದಚ್ಯುತಿಗೊಳಿಸಿ ಅವನ ಅಳಿಯನಾದ ಮೀರ್‌ ಖಾಸಿಂನನ್ನು ಬಂಗಾಳದ ನವಾಬನೆಂದು ಬ್ರಿಟಿಷರು ನೇಮಿಸಿದರು.

6) ಬಕ್ಸಾರ್‌ ಕದನದ ಪರಿಣಾಮಗಳಾವುವು?

ಉತ್ತರ: 1764ರಲ್ಲಿ ‘ಬಕ್ಸಾರ್‌’ ಎಂಬಲ್ಲಿ ಮುಖಾಮುಖಿ ಯಾದವು. ಅಂತಿಮವಾಗಿ ಯುದ್ಧದಲ್ಲಿ ಮೀರ್‌ ಖಾಸಿಂ ಸೋತು ಪಲಾಯನ ಮಾಡಿದರೆ ಷಾ ಆಲಂ ಶರಣಾಗತನಾದನು. ಬ್ರಿಟಿಷ್ ಶಕ್ತಿಗೆ ತಡೆಯೊಡ್ಡುವ ಈ ಒಕ್ಕೂಟದ ಪ್ರಯತ್ನ ಸಂಪೂರ್ಣ ವಿಫಲವಾಯಿತು.

 

ಬಕ್ಸಾರ್‌ ಕದನದ ಪರಿಣಾಮಗಳು:
1. ಈಸ್ಟ್‌ ಇಂಡಿಯಾ ಕಂಪನಿಗೆ ಬಂಗಾಳ ಮೇಲಿನ ‘ದಿವಾನಿ’ ಹಕ್ಕನ್ನು ಎರಡನೇ ಷಾ ಆಲಂ ನೀಡಿದನು.
2. ಮೀರ್‌ ಖಾಸಿಂ ಸೋತು ಪಲಾಯನ ಮಾಡಿದನು.
3. ಷಾ ಆಲಂ ಬ್ರಿಟಿಷರಿಗೆ ಶರಣಾದನು.
4. ಷಾ ಆಲಂ ವಾರ್ಷಿಕ 26 ಲಕ್ಷ ರೂ.ಗಳನ್ನು ಪಡೆದು ಬಂಗಾಳದ ಮೇಲಿನ ತನ್ನ ಹಕ್ಕನ್ನೆಲ್ಲ ಬಿಟ್ಟು ಕೊಡಬೇಕಾಯಿತು.
5. ಬ್ರಿಟಿಷ್ ಶಕ್ತಿಗೆ ತಡೆಯೊಡ್ಡುವ ಒಕ್ಕೂಟದ ಪ್ರಯತ್ನ ವಿಫಲವಾಯಿತು.
6. ಈ ಕದನವು ಬ್ರಿಟಿಷರು ಬಂಗಾಳ, ಬಿಹಾರ, ಓರಿಸ್ಸಾದ ನಿಜವಾದ ಒಡೆಯರೆಂದು ದೃಢೀಕರಿಸಿತು.
7. ಮೀರ್‌ ಜಾಫರ್‌ ಮರಣ ಹೊಂದಿದ್ದರಿಂದ ಅವನ ಮಗನಿಗೆ ವಿಶ್ರಾಂತಿ ವೇತನ ನೀಡಿ ಬಂಗಾಳದ ಪೂರ್ಣ ಆಡಳಿತವನ್ನು ಕಂಪನಿಯು ನಿರ್ವಹಿಸತೊಡಗಿತು.
8. ಯುದ್ಧನಷ್ಟ ಪರಿಹಾರವಾಗಿ ಕಂಪನಿಗೆ 50 ಲಕ್ಷ ರೂ.ಗಳನ್ನು ಔನ ನವಾಬನಾದ ಮುಜ-ಉದ್‌-ದೌಲ್‌ನು ಕೊಡಬೇಕಾಯಿತು.

 

ಅಂತಿಮವಾಗಿ ಬಕ್ಸಾರ್‌ ಕದನವು ಬ್ರಿಟಿಷರು ಬಂಗಾಳ, ಬಿಹಾರ ಮತ್ತು ಓರಿಸ್ಸಾದ ನಿಜವಾದ ಒಡೆಯರೆಂದು ದೃಢೀಕರಿಸಿತು ಹಾಗೂ ಔದ್‌ ಕೂಡ ಅವರ ಅಧೀನದಲ್ಲಿ ಉಳಿಯುವಂತಾಯಿತು.


III. ಹೆಚ್ಚಿನ ಪ್ರಶೋತ್ತರಗಳು

1) ಡಚ್ಚರು ಯಾವ ಕಂಪನಿಯನ್ನು ಸ್ಥಾಪಿಸಿದರು?

ಉತ್ತರ: ಯುನೈಟೆಡ್‌ ಈಸ್ಟ್‌ ಇಂಡಿಯಾ

2) ಮೊಘಲ್‌ ಸಾಮ್ರಾಟನಾದ ಯಾರು ಸೂರತ್‌ನಲ್ಲಿ ಮೊದಲ ಫ್ಯಾಕ್ಟರಿ ತೆರೆಯಲು ಫರ್ಮಾನು ನೀಡಿದನು?

ಉತ್ತರ: ಜಹಾಂಗೀರನು

3) ಇಂಗ್ಲಿಷರು ಯಾವುದನ್ನು ಪ್ರೆಸಿಡೆನ್ಸಿ ಕೇಂದ್ರಗಳನ್ನಾಗಿ ಮಾಡಿಕೊಂಡರು?

ಉತ್ತರ: ಮದ್ರಾಸ್, ಬಾಂಬೆ (ಮುಂಬೈ) ಮತ್ತು ಕಲ್ಕತ್ತಾ

4) ಫ್ರೆಂಚರು ಯಾವ ವರ್ಷದಲ್ಲಿ ತಮ್ಮ ಪ್ರಪ್ರಥಮ ದಾಸ್ತಾನು ಮಳಿಗೆಯನ್ನು ಸೂರತ್‌ನಲ್ಲಿ ಆರಂಭಿಸಿದರು?

ಉತ್ತರ: 1668

5) 1724ರಲ್ಲಿ ಹೈದರಾಬಾದ್‌ ಸಂಸ್ಥಾನವನ್ನು ಯಾರು ಸ್ಥಾಪಿಸಿದರು?

ಉತ್ತರ: ಅಸಫ್‌ ಜಾ

6) ಬ್ರಿಟಿಷ್ ಮತ್ತು ಫ್ರೆಂಚರ ನಡುವೆ ಎಷ್ಟು ಕಾರ್ನಾಟಿಕ್ ಯುದ್ದಗಳು ನಡೆದವು?

ಉತ್ತರ: ಮೂರು

7) ಈಸ್ಟ್‌ ಇಂಡಿಯಾ ಕಂಪನಿಗೆ ಬಂಗಾಳದ ಮೇಲಿನ ಯಾವ ಹಕ್ಕನ್ನು ಎರಡನೇ ಷಾ ಆಲಂ ನೀಡಿದನು?

ಉತ್ತರ: ದಿವಾನಿ

8) ಇಂಗ್ಲಿಷರು ತಮ್ಮ ಮೊದಲ ಸರಕು ಕೋಠಿಯನ್ನು ಎಲ್ಲಿ ಸ್ಥಾಪಿಸಿದರು?

ಉತ್ತರ: ಮದ್ರಾಸ್‌ನಲ್ಲಿ

9) ರಾಬರ್ಟ್‌ ಕ್ಲೈವನು ಬಂಗಾಳದಲ್ಲಿ ಯಾವ ಪದ್ದತಿಯನ್ನು ಜಾರಿಗೆ ತಂದನು?

ಉತ್ತರ: ದ್ವಿಪ್ರಭುತ್ವ

10) ನಾಸಿರ್‌ ಜಂಗ್‌ನನ್ನು ಸೋಲಿಸಿ ಫ್ರೆಂಚರು ಯಾವುದನ್ನು ವಶಪಡಿಸಿಕೊಂಡರು?

ಉತ್ತರ: ಹೈದರಾಬಾದ್‌

5 1 vote
Total
guest
Rate This Article

1 Comment
Inline Feedbacks
View all comments
Radha
Guest
Radha
1 month ago
Rate This Article :
     

Thank you for the Answers, sir, God bless you sir, really helpful